ಪಕ್ಷಿಗಳ ನೋಡಿದಿರಾ ಈ ಪಕ್ಶಿಗಳ ನೋಡಿದಿರಾ
ಲಕ್ಷಾಂತರ ಪಕ್ಷಾಂತರ ಪಕ್ಷಿಗಳ ನೋಡಿದಿರಾ
ಬಣ್ಣ ಬಣ್ಣದ ರೆಕ್ಕೆ ಪುಕ್ಕದಿ ಹಾರುತಿದೆ ನೋಡಿದಿರಾ
ಲಕ್ಷಾಂತರ ಪಕ್ಷಾಂತರ ಪಕ್ಷಿಗಳ ನೋಡಿದಿರಾ
ಹಸ್ತಾನಾಪುರದಿ ಹಾರುವ ಪಕ್ಷಿಗಳಿವು
ತಲೆ ತಲೆಮಾರಿನ ಕಥೆಗಳ ಹೇಳಿದವು
ಇತರೆ ಪಕ್ಷಿಗಳ ತೆಗಳಿ ದೂರಿದವು
ಕೊನೆಗೊಮ್ಮೆ ಹಾರಿದವು,
ಎಲ್ಲಿಗೆ? ಇನ್ನೆಲ್ಲಿಗೆ ತೆಗಳಿದೂರಿಗೆ ಭತ್ತದಳದೂರಿಗೆ
ಭತ್ತದಳದಿ ಮೇಯಲು ತೆನೆಯೇ ಇಲ್ಲಾ
ಇರುವುದೆಲ್ಲಾ ಟೊಳ್ಳೇ ಅಲ್ಲಾ
ಇನ್ನಿಲ್ಲಿರುವುದೂ ತರವಲ್ಲ
ಮತ್ತಿನ್ನೆಲ್ಲಿಗಾದರೂ ಹೋಗಲೇ ಬೇಕಲ್ಲಾ
ಹೋಗಲು ಅಡ್ಡಿಏನಿಲ್ಲಾ
ಹಾರಿದವು ಪಕ್ಶಿಗಳು ತಾವರೇಕೆರೆಗೆ
ತಾವರೇಕೆರೆಯ ಕಾಂಚಣ ಕರೆಗೆ
ಎಲ್ಲಿಯ ಕಾಂಚಾಣ ಎಲ್ಲಿಯ ತಾವರೆ
ಇರುವುದೆಲ್ಲಾ ಮಣ್ಣೂ ಕೆಸರೇ
ಆದರೇನಂತೆ ನಮ್ಮ ಪಕ್ಶಿಗಳಿಗಿವೆ ರೆಕ್ಕೆ ಪುಕ್ಕಗಳ ಆಸರೆ
0 comments:
Post a Comment