ಹಾಲ್ನೊರೆಯ ಜೀವಜಲದಿ ಹಾಲಾಹಲ

ಕಾರ್ಮೋಡ ಆಗಸವ ನುಂಗಿದಾಗ,
ಸಿಡಿಲು ಮಿಂಚುಗಳು ಬಾನನು ಸೀಳಿದಾಗ
ಭೋರ್ಗರೆಯಿತು ಜೀವನದಿ;
ನಿಷ್ಕರುಣೆಯ ಮೆರೆಯಿತು ದುರ್ವಿಧಿ

ಊರು ಕೇರಿಗಳು ಕೊಚ್ಚಿಹೋಗಿ
ಗುಡಿ ಗೋಪುರಗಳು ಮುಳುಗಡೆಯಾಗಿ
ಹಾಲ್ನೊರೆಯ ಜೀವಜಲದಿ ಹಾಲಾಹಲ
ಕರುಣೆ ಮರೆತ ಆಗಸದಿ ವಿಷಮ ಕೋಲಾಹಲ

ಮನೆಮಠಗಳ ನೆಲಸಮ ಮಾಡಿ
ಕಾಡು ನಾಡುಗಳ ಗುಡಿಸಿ ಸಾರಿಸಿ,
ಪ್ರಾಣಿ ಪಕ್ಷಿಗಳ ನುಂಗಿಹಾಕಿ
ಮೆರೆಯುತಿರುವೆ ಇಷ್ಟು ಕೋಪವೇಕೆ

ಶಿಲೆಗಳಾದರೇ ದೇವರುಗಳೆಲ್ಲಾ
ಕರಗಿಹೋಯಿತೇ ಪುಣ್ಯವೆಲ್ಲಾ !
ಇದು ಯುಗದ ಅಂತ್ಯಕೆ ಮುನ್ನುಡಿಯೋ
ಅಥವಾ ಕಾಲಚಕ್ರದ ಕನ್ನಡಿಯೋ ?

- ಸಂದೀಪ್

0 comments: